ಟಗರು ದುನಿಯಾ ಸೂರಿ ನಿರ್ದೇಶಿಸಿದ ಮತ್ತು ಕೆ. ಪಿ. ಶ್ರೀಕಾಂತ್ ಅವರು ನಿರ್ಮಿಸಿದ ಕನ್ನಡ ಚಲನಚಿತ್ರ. ಶಿವರಾಜ್ ಕುಮಾರ್ , ಮಾನ್ವಿತ ಮತ್ತು ಭಾವನ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್, ವಸಿಷ್ಠ ಸಿಂಹ ಮತ್ತು ದೇವರಾಜ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಶ್ರೀ ಸಿದ್ದಗಂಗ ಮಠ" ದ ಶಿವಕುಮಾರ ಸ್ವಾಮಿ ಚಿತ್ರದಲ್ಲಿ ಮೂರು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುತ್ತಿದ್ದರೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ಸಂಯೋಜಕ ಚರಣ್ ರಾಜ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ವನಿಸುರುಳಿ ಮತ್ತು ಹಿನ್ನೆಲೆ ಸಂಗೀತವನ್ನು ಚರಣ್ ರಾಜ್ ರಚಿಸಿದ್ದಾರೆ ಮತ್ತು ಛಾಯಾಗ್ರಹಣ ಮಹೇಂದ್ರ ಸಿಂಹರಿಂದ. 2016 ರ ಆಗಸ್ಟ್ 22 ರಂದು ಈ ಚಲನಚಿತ್ರವು ಅಧಿಕೃತವಾಗಿ ಬಿಡುಗಡೆಗೊಂಡಿತು. == ಉಲ್ಲೇಖ ==